ಜೂಲನ ನಿಯಮ -
ನಿಯತ ಉಷ್ಣತೆಯಲ್ಲಿ ಆದರ್ಶಾನಿಲಗಳು ವ್ಯಾಕೋಚಿಸಿದಾಗ ಅವುಗಳ ಶಕ್ತಿಯಲ್ಲಿ ಬದಲಾವಣೆ ಉಂಟಾಗುವುದಿಲ್ಲ. ಇದಕ್ಕೆ ಮೇಯರನ ಪೂರ್ವ ಸಿದ್ಧಾಂತ ಎಂದೂ ಹೆಸರುಂಟು. ಈ ನಿಯಮ ಆದರ್ಶಾನಿಲಗಳಿಗೆ ಮಾತ್ರ ಸೀಮಿತವಾಗಿದೆ. ನೈಜಾನಿಲಗಳು ಇದನ್ನು ಉಲ್ಲಂಘಿಸಿತ್ತವೆ. ಅಂದರೆ ನೈಜಾನಿಲಗಳು (ಸಾಮಾನ್ಯ ಅನಿಲಗಳು) ವ್ಯಾಕೋಚಿಸಿದಾಗ ತಂಪು ಅಥವಾ ಬಿಸಿ ಪರಿಣಾಮವನ್ನು ತೋರಿಸುತ್ತದೆ. 

		(ನೋಡಿ- ಜೂಲ್---ಥಾಮ್ಸನ್ ಪರಿಣಾಮ)
ವಿದ್ಯುತ್ತಿನಲ್ಲಿ ಜೂಲನ ನಿಯಮ: ರೋಧತೆಯ ಮೂಲಕ ವಿದ್ಯುತ್ತು ಹರಿದಾಗ ಅದರಲ್ಲಿ ಉತ್ಪತ್ತಿಯಾಗುವ ಉಷ್ಣದ ಬಗ್ಗೆ ಜೂಲ್ ಒಂದು ನಿಯಮವನ್ನು ರೂಪಿಸಿದ (1843) . ಒಂದು ರೋಧಕಾರಿಯಲ್ಲಿ (ರೆಸಿಸ್ಟರ್) ವಿದ್ಯುತ್ತು ಹರಿದಾಗ ಉಷ್ಣ ಉತ್ಪತ್ತಿಯಾಗುತ್ತದೆ. ಇದು ಆಗಿರಲಿ: ಈ  ವಾಹಕದಲ್ಲಿ ಹರಿಯುವ ವಿದ್ಯುತ್ ಪ್ರವಾಹದ ವರ್ಗ, ವಾಹಕದ ರೋಧತೆ  ಮತ್ತು ವಿದ್ಯುತ್ ವಾಹಕದಲ್ಲಿ ಹರಿಯುವ ಕಾಲ ಇವುಗಳಿಗೆ ಅನುಪಾತೀಯವಾಗಿದೆ ಅಂದರೆ ಗಣಿತ ರೀತ್ಯ.

ಅಥವಾ	
ಇಲ್ಲಿ  ಒಂದು ನಿಯತಾಂಕ ಇದಕ್ಕೆ ಉಷ್ಣದ ಯಾಂತ್ರಿಕಶಕ್ತಿ ಸಾಮ್ಯ ಎಂದು ಹೆಸರು.
(ಸಿ.ಟಿ.ಎಸ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ